Sunday 25 December 2011

ನಾನು-ನೀನು......

ರಾತ್ರಿ ತಂಗಾಳಿಗೆ ತಲೆಬಾಗಿ ನಿಂತಿದ್ದಾಗ
ಧರೆಯಲ್ಲಿದ್ದ ಚಂದ್ರನ ಪ್ರತಿಬಿಂಬದಲ್ಲಿದ್ದೆ ನೀನು 
ಸನಿಹ ಬರಲು ಬಯಸಿ ಬಂದಾಗ 
ಚಂದಿರನನ್ನೂ ಬಿಟ್ಟು ಕರಗಿ ಹೋಗಿದ್ದೆ ನೀನು 
ಇರುಳು ಕಂಡ ಕನಸಿನಲ್ಲಿ
ಸನಿಹ ಬರಲು ಮರೀಚಿಕೆಯಂತೆ ಮಾಯವಾದೆ ನೀನು
ಕಣ್ತೆರೆದು ನೀನಿದ್ದ ಇಬ್ಬನಿಯ
ಬೊಗಸೆಯಲ್ಲಿ ಹಿಡಿಯಲೋದಾಗ
ರವಿಯ ಕಿರನದೊಂದಿಗೆ ನಗುತ್ತಲೇ
ಕಂಪನ್ನು ಹೂವಿಗೆ ಧಾರೆಯೆರೆದು ಹೋದೆ ನೀನು
ಮಧ್ಯಾಹ್ನದ ಧಗೆಯಲ್ಲಿ ನೆರಳಲ್ಲೂ
ನಿನ್ನನ್ನೇ ಕಂಡು ಬಳಿಬರಲಾಗದೆ ಸೋತಾಗ
ಮುಗುಳುನಗೆಯೊಂದಿಗೆ ಹೀಯಲಿಸಿದೆ ನೀನು
ಸಂಜೆಯ ಬಣ್ಣದಲ್ಲೂ ನಿನ್ನ ಹುಡುಕುತ್ತಾ ನಿಂತಾಗ
ಗೂಡಿಗೆ ಮರಳುತಿದ್ದ ಬೆಳ್ಳಕ್ಕಿಯ ಗುಂಪಿನೊಂದಿಗೆ
ವಿದಾಯ ಹೇಳಿದೆ ನೀನು
ಆಗಲು ಸಿಗದಾಗ ಮತ್ತೆ ಅದೇ
ಚಂದ್ರನ ಬರುವಿಕೆಗಾಗಿ
ಕಾಯುತ್ತಾ ಕುಳಿತೆ ನಾನು.....

No comments:

Post a Comment

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...