Monday 26 December 2011

...ಬರುವಿಕೆಗಾಗಿ ಕಾದಿರುವ....

ಪ್ರಿಯೇ,
ನೀ ದೂರವಾದ ಕ್ಷಣದಿಂದ 
ಮನದಲ್ಲಿ ಚಂದ್ರನಿಲ್ಲದ ಇರುಳು ಮನೆ ಮಾಡಿದಂತಿದೆ
ಸ್ವರ ಕೇಳದೆ ನಿನ್ನ
ಪಕ್ಷಿಗಳ ಇಂಚರವಿಲ್ಲದೆ ರವಿ ಮೂಡಿ ಬಂದಂತಿದೆ
ನಿನ್ನ ಮುಗುಳುನಗ ಮರೆಯಾದಂದಿನಿಂದ
ನಗು ಎಂಬ ಪದಕ್ಕೆ ಅರ್ಥವಿಲ್ಲದಂತಿದೆ
ನಿನ್ನ ಕಂಪು ಮಾಯವಾದ ನಿಮಿಷದಿಂದ
ಹೂಗಳೆಲ್ಲಾ ಪರಿಮಳವನ್ನೇ ತ್ಯಜಿಸಿದಂತಿದೆ
ನಿನ್ನ ಸ್ಪರ್ಶ ಕಳೆದುಹೋದಂದಿನಿಂದ
ಶರೀರವೇ ಮರಗಟಿದಂತಿದೆ
ನಿನ್ನ ಬಿಟ್ಟು ಇರುವ ಪ್ರತಿ ಕ್ಷಣವೂ
ಬಲೆಯಲ್ಲಿ ಸಿಲುಕಿಹ ಮೀನಿನಂತಾಗಿದೆ
ಇಷ್ಟಾದ ಮೇಲೂ ಬಾರದೆ ಹೋದರೆ ನೀ
ನೀ ನಡೆವ ಮಣ್ಣಿನಲ್ಲೇ ಬೇರೆತುಬಿದುವೆ...
ಇಂತಿ ನಿನ್ನ ಬರುವಿಕೆಗಾಗಿ ಕಾದಿರುವ,
ಪ್ರೇಮಿ.....

ಮಿಂಚು_ಭೂಮಿ...

ನೀ ಬಂದು ಎಬ್ಬಿಸಿದಾಗಲೇ ಎಚ್ಚರ...
ನಿನ್ನ ಕಿರಣಗಳು ತಾಕಿದಾಗಲೇ ಕಣ್ರೆಪ್ಪೆಗಳ ಅಂತರ..
ಅಸ್ತವ್ಯಸ್ತವಾಗುವೆ ನಾ ಒಂದು ದಿನ ಬಾರದೆ ಇದ್ದರೆ ನೀ...
ಉಸಿರಾಟವೂ ನಿಂತೀ ಬಿಡುವುದು ಸೋಕದೆ ಹೋದರೆ ನೀ....
ನನ್ನಿಂದ ನೀ ದೂರವಾಗಲು ಅವಳೇ ಕಾರಣ .....
ಅವಳು ಬಂದ ದಿನವೇ ನನ್ನ ಮನಸಿನಾಸೆಗಳಿಗೆಲ್ಲ ಮರಣ...
ನೀ ಸೇರುವೆ ಅವಳ ಕೇಶದ ಮರೆಯಲ್ಲಿ...
ವಿಚಲಿತಳಾಗುವೆ ನಾನಾಗ ಇಲ್ಲಿ....
ಆ ಕಡುಗಪ್ಪು ಬಣ್ಣದಲ್ಲಿ ನೀ ಸೇರಿಬಿಡುವೆ..
ಆಗಸದ ಜೊತೆಗೆ ಆಗ ನಾನು ಅಳುವೆ..
ಅವಳಾದಳು ನಮ್ಮೀ ಅಂತರಕ್ಕೆ ಕಾರಣ...
ದೂರಾದಾಗಿನಿಂದ ಕೇವಲ ನಿನದೇ ಮನನ..
ಈ ಗೋಳು ಪಾಪ ಭೂಮಿಗೆ,
ಸೆಳೆದುಕೊಂದಾಗ ಕಾರ್ಮೋಡದ ಮಿಂಚುಬಳ್ಳಿಯು ಸೂರ್ಯನನ್ನು ತನ್ನೆಡೆಗೆ....

ದುರಂತ...

ಬೇಡವೆಂದರೂ ಆವರ್ತಿಸುತ್ತಿರುವ ಪರಿಸ್ಥಿತಿಗಳ ಜಡಿಮಳೆಗೆ,
ಎಷ್ಟೇ ಸಾಂತ್ವನದ ಹೊದಿಕೆ ಹೊದಿಸಿದರೂ,
ಮನಸಿಗೆ ಮಾತ್ರ ಭರವಸೆಯೇ ಇಲ್ಲ...
ಪ್ರತೀ ದಿನ ಮಳೆಯ ಚಳಿಗೆ ಬಳಲುತ್ತಲೇ,
ಮಂದಹಾಸದ ಮುಖವಾದ ಧರಿಸಿ,
ಬಿರುಕುಗಳ ಹಾರೈಕೆ ಮಾಡಲೆತ್ನಿಸುತಿದೆ ಪಾಪ!!!
ನಿರ್ಲಕ್ಷ್ಯ ಅಲೆಯಾಗಿ ಅಪ್ಪಳಿಸಿದರೂ,
ತನ್ನ ಹೊದಿಕೆಯನ್ನೇ ಬಿಗಿಯಾಗಿ ಹಿಡಿದು,
ನಗುವಿನ ಆಸರೆ ಬೇಡುತಿದೆ ..
ಆದರೂ ಎಲ್ಲಾ ಪ್ರಯತ್ನಗಳು ವಿಫಲವೇ..
ಯಾರಿಗೆ ಮೊರಇತ್ತರೂ ಉತ್ತರ ಮತ್ತದೇ ಹತಾಶೆ..
ಒಂದು ಪದದಲ್ಲಿ ಜೆವನವನ್ನು ಅರ್ಥೈಸುವುದಾದಲ್ಲಿ,
ಬದುಕಿನ ಸಾರಾಂಶಕ್ಕೆ ಉಳಿವ ಕೊನೇ ಪದ ದುರಂತ ಮಾತ್ರ..

ನಾವಿಕ..

ನಿನ್ನ ಕಣ್ಣೋಟಗಳ ಖೈದಿ ನಾನಾದೆ,
ಮೊದಲ ಭೇಟಿಯಲ್ಲೇ..
ಆ ಶಿಕ್ಹ್ಸೆ ಜೀವಾವಾಧಿಯಾದರು ನನಗದು,
ಒಪ್ಪಿಗೆಯಿತ್ತು ನಲ್ಲೇ...
ನಾ ಬಯಸಿದ್ದನ್ನೇ ನೀ ವಿಧಿಸಿದೆ...
ಇದು ನಿಜವೋ?ಭ್ರಮೆಯೋ? ಅರಿಯದಾಗಿದೆ...
ನೀ ಮನಸ್ಸೆಂಬ ಚಂದಿರನ ಬೆಳದಿಂಗಳಾದೆ..
ನನ್ನೀ ಪ್ರೀತಿ ಅರಮನೆಯ ಏಕಮಾತ್ರ ಒಡತಿ ನೀನಾದೆ..
ಸ್ವಾತಿ ಮುತ್ತಾದ ನಿನ್ನನ್ನು ,
ಭುವಿಗೆ ಸೋಕದಂತೆ ಬೊಗಸೆಯಲ್ಲಿಡುವೆ...
ಕಡಲಲ್ಲಿ ನಿನ್ನಾಸೆಗಳ,
ಹಡಗಿನ ನಾವಿಕ ನಾನಾಗುವೆ..
ನನ್ನವಳಾದೆ ನೀ, ಆ ಅದೃಷ್ಟಕ್ಕೆ ಋಣಿ ನಾನೆಂದೂ...
ಇನ್ನೇನನ್ನು ಕೇಳಲಾರೆ, ವಿಧಿಯೇ ನಿನಗೆಂದೂ..

ನೀನು........

ಚಳಿಗಾಲದಲ್ಲಿ ಎಲ್ಲೋ ಒಮ್ಮೊಮ್ಮೆ ಸುರಿವ ಮಳೆಯಂತೆ,
ಮನದ ಭಾವನೆಗಳನ್ನು ನೆನೆಸಿ ಹೋದಾಗಲೆಲ್ಲಾ,
ತೇವಕ್ಕೆ ಮಾರುಹೊಗಿತ್ತು ಹೃದಯ...
ಅತಿಥಿಯಾದ ಅವನ ಆಗಮನ,
ತಾತ್ಕಾಲಿಕ ಎಂಬುದ ಮರೆತು,
ಹುಚ್ಚು ಮನಸು ಬರುವಿಕೆಗೆ ನಿರೀಕ್ಷಿಸುತಲಿತ್ತು...
ವಾಸ್ತವತೆಗೆ ಹತ್ತಿರವಾದಂತೆ ,
ತೇವ ಆವಿಯಾಗುತ್ತ ಬಿರುಕುಗಳೊಂದಿಗೆ,
ಮನವು ಬರಿದಾಯಿತು..
ಮಂಜಿನ ಹನಿಯಾಗಿ ನೀ ಬಂದಾಗ,
ಬಿರುಕುಗಳಿಗೆನೋ ಆಹ್ಲಾದ...
ಒಡೆದ ಪದರವೂ ನಸುನಗುತ್ತಾ ನಿನ್ನ ಸ್ವಾಗತಿಸುತ್ತಿರಲು,
ಅಂತರಾಳದಲ್ಲಿ ಹುದುಗಿದ್ದ ಆಸೆಗಳೆಲ್ಲಾ,
ಬಣ್ಣಹಚ್ಚಿ ಹಾರಿದೆ ಬಾನೆತ್ತರಕೆ,
ಸಂತೃಪ್ತಿ ತಂದಿದೆ ನಿನ್ನ ಬರುವಿಕೆ...

......ಇಚ್ಛೆ-ಹತಾಶೆ....

ಇಚ್ಚಿಸಿದ್ದೆಲ್ಲವೂ ಸಿಕ್ಕರೆ ,
ಹತಾಶೆಗೆಲ್ಲಿದೆ ಉಳಿಗಾಲ...
ಇಚ್ಚಿಸುವುದನ್ನೇ ಮರೆತರೆ,
ಮನೆಮಾಡುವುದು ಬರೀ ಬರಗಾಲ....
ಎರಡರ ನಡುವೆ ಬದುಕು ...
ಒಮ್ಮೆ ಮುನಿಸು,
ಮತ್ತೊಮ್ಮೆ ಮತ್ತದೇ ,
ನೆರವೇರದ ಇಚ್ಚೆಯ ಕನಸು..... 

.........ನಿರಾಶೆ.........

ಕೆಂಪು ದೀಪಗಳ ನಡುವೆ
ಮುಖವಾಡದ ಚಹರೆಗಳು
ಬಿದ್ದ ಪರದೆ ಏಳುವವರೆಗೂ ನರ್ತಿಸುವರು
ವರ್ಣರಂಜಿತ ವೇಷದ ಮರೆಯಲ್ಲಿ 
ಕೆಲವೊಮ್ಮೆ ರಕ್ಕಸರೂ ಬಂದಾರು...
ಅಂತಃಪುರದಲ್ಲಿನ ಆತಂಕಕ್ಕೊಂತು
ಬೆಲೆಯೇ ಇಲ್ಲ ನಾಟಕದಲ್ಲಿ...
ಅನತಿ ದೂರದಲ್ಲೇ ಒಮ್ಮೆ ಬದುಕಿತ್ತು,
ಅನುಮತಿ ಕೇಳದೆಯೇ ಕೊಂಡೊಯ್ದರು
ಅನಂತರ ಅನುಕಂಪ , ಅನುರಾಗವೆಲ್ಲ ದೂರದ ನಕ್ಷತ್ರ ಮಾತ್ರ...
ಅನೇಕರ ಅನಾದರಗಳೇ ನಿರಂತರ
ನಿಂದನೆ-ನಿರ್ಲಕ್ಷ್ಯಗಳ ನಡುವೆ ಬಾಳು ನಿರ್ಗತಿಕವಾಗಿದೆ
ನಿರೀಕ್ಹ್ಸೆಗೆ ಇಲ್ಲಿನ ಉತ್ತರ ಬರೀ ನಿರಾಶೆಯಾಗಿದೆ...... 

.......... .ಪ್ರಶ್ನೆ........

ನಿನ್ನಿಂದ ನಾ ಅಷ್ಟನ್ನೂ ಅಪೇಕ್ಷಿಸಬಾರದೆ?

ಆಸೆಯೆಂಬ ಬರೀ ಚಿತ್ರಕ್ಕೆ ಕಿಂಚಿತ್ತೂ ಬಣ್ಣ ಹಚ್ಚಬಾರದೆ?
ಮನಸಿಗೆ ಹೇಗೆ ಹೇಳಲಿ ನಾ ಸಾಂತ್ವನ?
ನಿನ್ನ ಕನವರಿಕೆಯಲ್ಲಿ ತನ್ನತನವನ್ನೇ ಮರೆತೆನಾ?
ಮನಸಿಗೆ ಸುಳ್ಳು ಹೇಳಿದೆನಾ?
ನಿನ್ನನ್ನೊಮ್ಮೆ , ಮನಸನೊಮ್ಮೆ ಸಂಭಾಳಿಸಿವುದರಲ್ಲಿ 
ನನ್ನ ಅಸ್ತಿತ್ವವನ್ನೇ ಮರೆತೆನಾ?????? 

......ದುರಂತ-ನಾಯಕ .....

ಸರಳತನಕ್ಕೆ ಮಾರುಹೋದ ದಿನವೇ 
ಬರಿದಾಗಿದ್ದ ಮನಸ್ಸಿನಲ್ಲಿ ಮಳೆಹನಿಯಾದಳವಳು
ದಿನಗಳೆದಂತೆ ಇಷ್ಟ ಏಕೋ ಮಿತಿಮೀರಿ 
ಬೆಳದಿಂಗಳ ಬಾಲೆಯಾಗಿ ಕನಸಿನ ಲೋಕಕ್ಕೆ ಬಂದೇ ಬಿಟ್ಟಳವಳು
ಅವಳ ಕಣ್ಣನ್ಚಿಗಿರುವ ಮಿಂಚಿಗೆ ಕಾರಣವೇನೆಂದು
ಚಿಂತಿಸುತ್ತಾ ಮಲಗಿರಲು ನಾ
ತಾರೆಗಳೆಲ್ಲಾ ಮೋಡದ ಮರೆ ಸೇರಿ
ತಮ್ಮೆಲ್ಲರ ಹೊಳಪನ್ನು ಕದ್ದಳವಳೆಂದು ದೂರುತ್ತಿರಲು
ಅದ ಕೇಳಿ ನಸುನಗುತ್ತ ಕನಸಿಗೆ ನಾ ತೆರಳಲು
ಮತ್ತದೇ ಮೋಹಕ ನಗೆಯೊಂದಿಗೆ ಸ್ವಾಗತ ಕೋರಿದಳವಳು
ಕನಸಿನ ಕಾರುಬಾರು ಸಾಕಾಗಿ
ನನ್ನೀ ಸ್ಥಿತಿ ವಿವರಿಸಲು ತೆರಳವಳ ಬಳಿ
ಕೊಂಚ ಹಿಂಜರಿದು ಅವಳೆಂದಳು
ಅವಳ ಕನಸುಗಲಿಗಾಗಲೇ ಓರ್ವ ನಾಯಕನಿರುವನೆಂದು
ಹೀಗೆ
ನನ್ನೀ ಮೊದಲ ಪ್ರೇಮ ಕಥೆಗೆ
ನಾನಾದೆ ದುರಂತ ನಾಯಕ ಕೊನೆಗೆ....

Sunday 25 December 2011

ನಾನು-ನೀನು......

ರಾತ್ರಿ ತಂಗಾಳಿಗೆ ತಲೆಬಾಗಿ ನಿಂತಿದ್ದಾಗ
ಧರೆಯಲ್ಲಿದ್ದ ಚಂದ್ರನ ಪ್ರತಿಬಿಂಬದಲ್ಲಿದ್ದೆ ನೀನು 
ಸನಿಹ ಬರಲು ಬಯಸಿ ಬಂದಾಗ 
ಚಂದಿರನನ್ನೂ ಬಿಟ್ಟು ಕರಗಿ ಹೋಗಿದ್ದೆ ನೀನು 
ಇರುಳು ಕಂಡ ಕನಸಿನಲ್ಲಿ
ಸನಿಹ ಬರಲು ಮರೀಚಿಕೆಯಂತೆ ಮಾಯವಾದೆ ನೀನು
ಕಣ್ತೆರೆದು ನೀನಿದ್ದ ಇಬ್ಬನಿಯ
ಬೊಗಸೆಯಲ್ಲಿ ಹಿಡಿಯಲೋದಾಗ
ರವಿಯ ಕಿರನದೊಂದಿಗೆ ನಗುತ್ತಲೇ
ಕಂಪನ್ನು ಹೂವಿಗೆ ಧಾರೆಯೆರೆದು ಹೋದೆ ನೀನು
ಮಧ್ಯಾಹ್ನದ ಧಗೆಯಲ್ಲಿ ನೆರಳಲ್ಲೂ
ನಿನ್ನನ್ನೇ ಕಂಡು ಬಳಿಬರಲಾಗದೆ ಸೋತಾಗ
ಮುಗುಳುನಗೆಯೊಂದಿಗೆ ಹೀಯಲಿಸಿದೆ ನೀನು
ಸಂಜೆಯ ಬಣ್ಣದಲ್ಲೂ ನಿನ್ನ ಹುಡುಕುತ್ತಾ ನಿಂತಾಗ
ಗೂಡಿಗೆ ಮರಳುತಿದ್ದ ಬೆಳ್ಳಕ್ಕಿಯ ಗುಂಪಿನೊಂದಿಗೆ
ವಿದಾಯ ಹೇಳಿದೆ ನೀನು
ಆಗಲು ಸಿಗದಾಗ ಮತ್ತೆ ಅದೇ
ಚಂದ್ರನ ಬರುವಿಕೆಗಾಗಿ
ಕಾಯುತ್ತಾ ಕುಳಿತೆ ನಾನು.....

.....ಅಲ್ಲಿಯೇ ಬದುಕು.....


ಭಾವಗಳನ್ನು ಹಾಳೆಯಲಿ ಗೀಚಿ 
ನೆಮ್ಮದಿ ಕಾಣ ಹೊರಟೆ..
ಪದಗಳ ಕೊರತೆ ಕಾಡಿ 
ಅದೆಷ್ಟೋ ಹಾಳೆಗಳ ಸುರುಟಿ ಎಸೆದೆ
ಕವಿಯಾಗುತ್ತೇನೆಂದು ಅಂದುಕೊಳ್ಳುವುದೇನೋ ಸುಲಭ
ಬರೆದಿದ್ದೆಲ್ಲಾ ಕವನವಾಗಲು ಸಾಧ್ಯವೇ?
ಅಸ್ಪಷ್ಟ ಭಾವನೆಗಳಿರಲು ಮನದಲಿ
ಪದಗಳು ತಾನೇ ಏನು ಮಾಡಲು ಸಾಧ್ಯ?
ತುಮುಲ ತುಂಬಿದ ಹೃದಯಕ್ಕೆ
ಸಾಂತ್ವನ ಹೇಳಬಲ್ಲದೆ ಲೇಖನಿ ,ಕಾಗದ?
ಪ್ರತೀ ಪ್ರಶ್ನೆಗೂ ಉತ್ತರ
ಪ್ರತೀ ಕಂಬನಿಗೂ ಕಾರಣ
ಹುಡುಕಿದಷ್ಟೂ ಕಾಗದ ತುದಿ ತಲುಪುವೆವು ಹೊರತು
ಮತ್ತದೇ ಪ್ರಶ್ನೆಗಳಿಗೆ ಬಂದು ನಿಲ್ಲುವುದು ಬದುಕು....

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...