ಭಾವಗಳನ್ನು ಹಾಳೆಯಲಿ ಗೀಚಿ
ನೆಮ್ಮದಿ ಕಾಣ ಹೊರಟೆ..
ಪದಗಳ ಕೊರತೆ ಕಾಡಿ
ಅದೆಷ್ಟೋ ಹಾಳೆಗಳ ಸುರುಟಿ ಎಸೆದೆ
ಕವಿಯಾಗುತ್ತೇನೆಂದು ಅಂದುಕೊಳ್ಳುವುದೇನೋ ಸುಲಭ
ಬರೆದಿದ್ದೆಲ್ಲಾ ಕವನವಾಗಲು ಸಾಧ್ಯವೇ?
ಅಸ್ಪಷ್ಟ ಭಾವನೆಗಳಿರಲು ಮನದಲಿ
ಪದಗಳು ತಾನೇ ಏನು ಮಾಡಲು ಸಾಧ್ಯ?
ತುಮುಲ ತುಂಬಿದ ಹೃದಯಕ್ಕೆ
ಸಾಂತ್ವನ ಹೇಳಬಲ್ಲದೆ ಲೇಖನಿ ,ಕಾಗದ?
ಪ್ರತೀ ಪ್ರಶ್ನೆಗೂ ಉತ್ತರ
ಪ್ರತೀ ಕಂಬನಿಗೂ ಕಾರಣ
ಹುಡುಕಿದಷ್ಟೂ ಕಾಗದ ತುದಿ ತಲುಪುವೆವು ಹೊರತು
ಮತ್ತದೇ ಪ್ರಶ್ನೆಗಳಿಗೆ ಬಂದು ನಿಲ್ಲುವುದು ಬದುಕು....
ಶೀತಲ್,
ReplyDeleteಬ್ಲಾಗ್ ಲೋಕಕ್ಕೆ ಸ್ವಾಗತ.ನಿಮ್ಮ ಕವಿತೆಗಳಲ್ಲಿ ಹೊಸತನವಿದೆ.ಮುಂದುವರಿಸಿ.
ಅಭಿನಂದನೆಗಳು.
ಧನ್ಯವಾದಗಳು:):)
ReplyDeleteಇದನ್ನು ಈ ಮೊದಲೇ ಎಲ್ಲೋ ಓದಿದ ನೆನಪು..
ReplyDeleteಕವನದ ಪದಗಳ ಜೋಡಣೆ ಮನಸೆಳೆಯುವಂತಿದೆ..
ಫೆಸ್`ಬುಕ್ ಅಲ್ಲಿ ಓದಿರಬಹುದೇನೋ .. ತುಂಬಾ ದಿನಗಳು ಆಗಿವೆ.. ಮತ್ತೆ ಓದಿ ಖುಷಿ ಆಯಿತು.. ಭಾವನೆಗಳ ಅತೀ ಸೊಗಸಾಗಿ ಬರೆದಿದ್ದೀರಾ .. ಅಷ್ಟೇ ಅಲ್ಲದೆ.. ನೀಲಿ ಬಣ್ಣ , ಕೆಂಪು , ಹಸಿರು ಮತ್ತು ಬಿಳಿ ಬಣ್ಣ .. ತುಂಬಾ ಇಷ್ಟ.. ಇಲ್ಲಿ ಹಾಕಿರುವ ಅನೇಕ ಚಿತ್ರಗಳಲ್ಲಿ ನೀಲಿ ಬಣ್ಣ ಇದೆ.. ಅದು ಬಹಳಾ ಖುಷಿ ಕೊಟ್ಟಿದೆ.. ಕವನಗಳ ಓದುವ ಮೊದಲೇ ನೀಲಿ ಬಣ್ಣ ನೋಡಿ ಬ್ಲಾಗ್ ಸೇರಿಕೊಂಡೆವು.. ಆಮೇಲೆ ಕವನಗಳ ಓದಿದ ಮೇಲೆ ತುಂಬಾ ಖುಷಿ ಆಯಿತು.. ನಿಮಗೆ ಶುಭವಾಗಲಿ.. :)
ಧನ್ಯವಾದಗಳು ಸರ್...:)ಕವಿತೆಯನ್ನು ಕನ್ನಡ ಬ್ಲಾಗ್ನಲ್ಲಿ ಹಾಕಿದ್ದೆ ಅಲ್ಲಿ ಓದಿರಬಹುದು ನೀವು...:)ನಿಮ್ಮೆಲ್ಲರ ಪ್ರೋತ್ಸಾಹದಿಂದಲೇ ಇಷ್ಟೆಲ್ಲಾ ಬರೆಯಲು ಆಗಿದ್ದು...:):)ಮತ್ತೊಮ್ಮೆ ಧನ್ಯವಾದಗಳು ಸರ್:):)
Deleteಧನ್ಯವಾದಗಳು:):)ಸರ್ ...
ReplyDeleteಈ ಹುಡುಕಾಟದ ತಪನೆಯಲ್ಲೇ ಒಲುಮೆಯ ಸಾಕ್ಷಾತ್ಕಾರವೂ ಇದೆ ಗೆಳತಿ. ಇಲ್ಲಿನ ಪದಗಳ ಲಾಲಿತ್ಯವೂ ನೆಚ್ಚಿಗೆಯಾಯಿತು.
ReplyDelete