Monday 20 August 2012

......66 ಸ್ವಾತಂತ್ರ್ಯ.........






ಮುತ್ತು,ವಜ್ರ,ರತ್ನ ಹವಳದ 
ಸಿಂಗಾರ ನಿನ್ನ ಕೊರಳಿಗಿತ್ತು
ಕಿತ್ತರಾ ಕಿರಾತಕರು ನಿನ್ನ 
ಕೊರಳ ಲಂಕಾರಕಿಟ್ಟ ವೆಲ್ಲವ
ಗುಲಾಮಗಿರಿಯ ಕಿರುಬೆರಳಲಿ ಹಿಡಿದು
ನಿಂತು ಆಳಿದರಾ ರಕ್ಕಸರು
ಆಳ್ವಿಕೆಯ ಸಿಂಹಾಸನವ ಯುಗಗಳೇ
ಹೋರಾಡಿ ಬಿಡಿಸಿದರು ನಿನ್ನ 
ಕೆಚ್ಚೆದೆಯ ಮಕ್ಕಳು
ಇದ್ದ  ಹರಕಲು ಸೀರೆಯನ್ನೇ ಉಡಿಸಿ
ನಿನಗೆ ಕೈಗೆ ಹಾಕಿದ್ದ ಬೇಡಿಯಾ 
ದೂರ ಮಾಡಿದರಾ ಮಹಾತ್ಮರು
ಮುಂದಿನ ಪೀಳಿಗೆಗೆ....
ಇಂದೋ ನಿನಗೆ 
ಕಿಂಚಿತ್ತೂ ನಿನ್ನತನವಿಲ್ಲ
ಸಂಸ್ಕೃತಿಯೇ ನಿನ್ನದಲ್ಲ
ವಿಕ್ರುತಿಯೇ ಎಲ್ಲಾ
ಭ್ರಷ್ಟಾಚಾರದ ಕುಂಕುಮವಿಟ್ಟು
ಸಾಲದ ಸೀರೆಯುಡಿಸಿರುವರು ನಿನಗೆ..
ಸ್ವಂತಿಕೆಯ ಸ್ವಾತಂತ್ರ್ಯ
ನಿನ್ನ ಕುತ್ತಿಗೆಗೆ ಹಾರ  ಯಾವಾಗ???
ಕೊನೇಪಕ್ಷ 
ಬರಲಿ 66 ತಿರುಗಿದಾಗ....

1 comment:

  1. ಒಂದು ತೀವ್ರ ವಿಷಾದದ ಬೆಳವಣಿಗೆಯನ್ನು ಮನ ಮುಟ್ಟುವಂತೆ ಚಿತ್ರಿಸಿಕೊಟ್ಟಿದ್ದೀರಿ.

    ಭಾರತೀಯತೆಯು ಭಾರತೀಯತೆಯಾಗೇ ಎಂದು ನೆಲೆ ನಿಲ್ಲುವುದೋ?

    ReplyDelete

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...