Wednesday 8 August 2012

.....ನಿವೇದನೆ.........





ಪ್ರೀತಿಯ ನೀ ಹೇಗೆ ಅಳೆದೆ
ಮಾಪನವನ್ನಾಗಿಸಿ ಕಾಲವನ್ನು ಮಾತ್ರ???
ಬಚ್ಚಿಟ್ಟೂ ,ಬಚ್ಚಿಡಲಾರದ 
ಭಾವನೆಗಳ ಹಂಚಿಕೊಂಡದನ್ನ,
ಸಮಯಕ್ಕೇ ಸವಾಲೆಸೆದು
ನಸುನಕ್ಕು ಮುನ್ನಡೆದ ದಿನಗಳನ್ನ
ಮರೆತೆಯಾ ನೀ???
ಎಂದೋ ಇದ್ದ ಇತಿಹಾಸ
ಮತ್ತೆ ಕದ ತಟ್ಟಿದಾಗ,
ಬದಿದೆಬ್ಬಿಸಿತೆ ಎಂದೋ 
ಒಮ್ಮೆ ಅರಳಿದ್ದ
ನನ್ನೊಂದಿಗಿರುವಾಗ ನಿದಿರೆಗೆ
ಜಾರಿದ್ದ ಪ್ರೇಮ......????
ಮುನಿಸಿಕೊಳ್ಳಲು ಇತಿಹಾಸ
ವರ್ತಮಾನವನ್ನೇ ಅಲ್ಲಗಳೆದೆಯಾ ನೀ??
ಎರಡು ಅನುರಾಗ  ದಡಗಳ 
ನಡುವಿರುವ ದ್ವಂದ್ವ ಸೇತುವೆಯಲ್ಲಿ
ನಿಂತಿರುವೆ ನೀ...
ವರ್ತಮಾನವಾಗುವುದು ಒಂದು ನೆನಪು
ಇತಿಹಾಸದ ದಡವನ್ನಾರಿಸಿದರೆ ನೀ.... 

2 comments:

  1. ಒಂದು ದ್ವಂದ್ವದ ಸಮರ್ಥ ಚಿತ್ರಣ. ಭಾವ ತೀವ್ರತೆಯು ಇಲ್ಲಿ ಒಡ ಮೂಡಿದೆ.

    ReplyDelete
  2. ನಿವೇದನೆಯೊಳಗೆ ಶಕ್ತಿಯಿದೆ. ಸುಂದರ ಅನುಭೂತಿ.

    ReplyDelete

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...