Thursday 26 January 2012

...ನೀನಿದ್ದರೆ ಜೊತೆಗೆ...


ನೀನಿದ್ದರೆ ಜೊತೆಗೆ,
ಸೋಲೆಂಬ ತೆರೆಗೆ
ಬೀಳುವುದು ಶಾಶ್ವತ ಪರದೆ
ಬಾಳೆಂಬ ರಥಕ್ಕೆ
ಕಟ್ಟಿದಂತೆ ರೆಕ್ಕೆ
ನೆಲದ ಮೇಲೆ ಇರದು ಗಾಲಿ
ಕ್ಷಣ ಕ್ಷಣವಾಗುವುದು ಇತಿಹಾಸ
ನೆನಪಿಸಿಕೊಂಡರೂ ಅಲ್ಲಿ ಇಲ್ಲಿ
ಬಿಟ್ಟು ಹೋಗುವವು ಕೆಲವು
ವಿಜಯದ ಸನ್ನಿವೇಶಗಳು 
ಇರಲು ಅಸಂಖ್ಯಾತ 
ನೀನಿದ್ದರೆ ಜೊತೆಗೆ,
ಬಾನಲ್ಲಿ ನನ್ನ ಬಿಡಾರ
ಚಂದ್ರ ತಾರೆಗಳೇ ಮನೆಗೆ ಸಿಂಗಾರ
ಕಾಮನಬಿಲ್ಲೇ ದಾರಿಯಾಗಿರುವ ಗೂಡಿಗೆ
ಬೆಳ್ಳಕ್ಕಿಗಳ ಸಾಲೇ ತೋರಣ
ಗೋಡೆಗೆ ಬದಲಾಗುವ ಆಗಸದ ಬಣ್ಣ 
ಕನಸು-ನನಸಿಗೆ ಸೇತುವೆ ಕಟ್ಟಿ
ಪ್ರತೀ ದಿನ ನೀಡುವೆ ಭೇಟಿ
ಕನಸಿನಷ್ಟೇ ಮನೋಹರವಾಗಿ 
ನನಸನ್ನು ಕಟ್ಟುವೆ ನಿರ್ಭಯವಾಗಿ
ನೀನಿದ್ದರೆ ಜೊತೆಗೆ,  
ಅದೃಷ್ಟವೇ ಕೇವಲ
ನೀನಿದ್ದರೆ ಜೊತೆಗೆ ....

4 comments:

  1. ಅರ್ಪಣೆಯ ಭಾವ ಮತ್ತು ನಿಜ ಪ್ರೀತಿ ಎರಡೂ ಮನ ಸೆಳೆಯಿತು.

    ಭಾಷೆಯ ಸರಳ ಬಳಕೆಗಾಗಿ ಶಭಾಷ್ ಮೇಡಂ...

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  2. ಧನ್ಯವಾದಗಳು badarinath ಸರ್:):)ನಿಮ್ಮ ಆಮಂತ್ರಣಕ್ಕೆ ತುಂಬಾ ಧನ್ಯವಾದ:)

    ReplyDelete
  3. ಶೀತಲ್ ನಿಮ್ಮ ಕವನ ಓದಿ ನನಗೆ ರಫಿಯವರ ಮಾಧುರ್ಯಭರಿತ ಹಾಡು ನೆನಪಾಯ್ತು... ತುಮ್ ಅಗರ್ ಸಾಥ್ ದೇನೇ ಕಾ ವಾದಾ ಕರೋ ಮೈ ಯೂಂಹೀ ಮಸ್ತ್ ನಗ್ಮೆ ಸುನಾತಾ ರಹೂಂ... ನೀ ನನ್ನ ಜೊತೆಯಾಗಿರೋ ಭಾಷೆ ಕೊಡು ನೋಡು ಹೇಗೆ ನಾನು ಹೀಗೇ ಮಧುರ ಗಾಯನದ ಸವಿ ನಿನಗೆ ಉಣಬಡಿಸುತ್ತೇನೆ..... ಪದಗಳಲ್ಲಿ ಸರಳತೆಯ ಜೊತೆಗೆ ತುಡಿತ ಇನಿಯ ಜೊತೆಗಿರಲೆನ್ನುವ ಆಶಯ...ಇಷ್ಟ ಆಯ್ತು.

    ReplyDelete
  4. ಧನ್ಯವಾದಗಳು ಸರ್:):)

    ReplyDelete

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...