Tuesday 4 December 2012

...ಶಾಯಿ ಇಲ್ಲದ ಲೇಖನಿ ...





ಖಾಲಿ ಹಾಳೆಯ ಕೇಳಲು ಮುನಿಸೇಕೆಂದು ,
ಕಣ್ಸನ್ನೆ ಮಾಡಿತು ಲೇಖನಿಯ ಕಡೆಗೆ ..
ಲೇಖನಿಗೆ  ಕೇಳಿದಾಗ ಬೆಟ್ಟು ಮಾಡಿತದು ,
ಶಾಯಿ ಮುಗಿದ ಬಾಟಲಿಯ ಎಡೆಗೆ..
ಒಣಗಿದ ಶಾಯಿಯ ಬಾಟಲಿಯಡೆ,
ನಾ ತಿರುಗಲು 
ತೋರಿಸಿತದು ಹತ್ತಿರವಿದ್ದ ಕನ್ನಡಿಯ.... 
ಪದಗಳ ಬರ ಬರೆಯದಿರಲು ಕಾರಣ ವೆನಲು 
ನಾ ಕನ್ನಡಿಗೆ,
ದೂರದಲಿದ್ದ ನಿಘಂಟನೊಮ್ಮೆ ನೋಡಿ 
ನಸುನಕ್ಕಿತು ಪ್ರತಿಬಿಂಬ.... 

6 comments:

  1. ಕವಿಯ ಅನಿವಾರ್ಯತೆ ಮತ್ತು ಅಕ್ಷರ ಪ್ರೀತಿ ಇಲ್ಲಿ ಒಡ ಮೂಡಿದೆ.

    ReplyDelete
  2. ಚೆನಾಗಿದೆ..ಬರೆಯುತ್ತಿರಿ...ಚಿತ್ರವೂ ಇಷ್ಟವಾಯ್ತು...

    ReplyDelete
  3. Sheethal.. what a writting.. u deserve to become great writer in coming days

    ReplyDelete

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...