Thursday 19 July 2012

.......ಇಂದೇಕೋ....



ಬದುಕಿನ ಜಂಜಾಟದಲಿ ಸಿಲುಕಿ,
ಉಸಿರಾಡಲೂ ಪುರುಸೊತ್ತಿಲ್ಲದ ಇಕ್ಕಟ್ಟಿನಲ್ಲಿ,
ಇಂದೇಕೋ ಅನಿಸಿತು 
ಗೀಚಲು ಎರಡು ಸಾಲು... 
ಬಾರದೆ ಯಾವುದೇ ಕಲ್ಪನೆ ,
ಇರದೇ ಯಾವುದೇ ಭಾವನೆ,
ಮನಸ್ಸಿನ ಸಮಾಧಾನಕ್ಕೆ
ಏನೂ ಒಂದಿಷ್ಟು ಪದಗಳ ಜೋಡಿಸಿದೆ
ಆದರೆ,
ಪಾಪ!! ಬರೆದ ಪದಗಳೆಲ್ಲಾ 
ಸುಮ್ಮನೆ ಮಲಗಿವೆ 
ಇಂದೇಕೋ ಕವನವಾಗದೆ......

2 comments:

  1. ಕವಿತೆಯ ಮೂಲ ಸತ್ವವೇ ಹಾಗೆ ಅದು ಏನೂ ಇಲ್ಲ ಎನಿಸುವ ಗಳಿಗೆಯಲ್ಲೇ ಅಮೂರ್ತ ಅನಿಸುವ ಯಾವುದೋ ಭಾವವನ್ನು ಹೊಮ್ಮಿಸಿಬಿಟ್ಟಿರುತ್ತದೆ.

    ReplyDelete

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...