Thursday, 19 July 2012
Sunday, 8 July 2012
...ಏಕಾಂತ...
ಅಂದಿದ್ದ ಜೋಡುಮರ
ಇಂದೇಕೋ ಒಂಟಿಯಾಗಿ
ಬಿರುಗಾಳಿಗೆ ಸಿಲುಕಿ
ನೆಲಕ್ಕುರಿಳಿದ ಸಂಗಾತಿಯ
ದಿಟ್ಟಿಸುತ್ತಾ ತಲೆಬಾಗಿ ನಿಂತಿದೆ..
ಮಿಲನದ ಶತ್ರು ಬಿರುಗಾಳಿ
ಕರುಣೆಯೇ ಇಲ್ಲದಂತೆ
ಉರುಳಿ ಬಿದ್ದ ಮರದ
ಕುರುಹೂ ಬಿಡಬಾರದೆಂದು ಬೀಸಲು,
ಪಾಪ! ನೋಡಲಾರದೆ ಆ ಒಂಟಿ ಮರ
ತನಗಾಗಿ ಕಣ್ನೀರಿಡಲು
ಕಾರ್ಮೋಡಗಳ ಮೊರೆ ಇಟ್ಟಿದೆ...
ಅಳಲು ಜೋರಾಗಿ ಎಲ್ಲಾ ಮೋಡಗಳು
ದಾರುಳ ಆಕ್ರಂಧನ ಕಿವಿಗೆ ರಾಚಿದೆ...
ಸಮಸ್ತ ಮಳೆಹನಿಗಳು ಧರೆಗುರುಳಿ
ಕೊನೆಗೂ ಬಿರುಗಾಳಿ
ಮೌನ ತಾಳಲು
ಏಕಾಂಗಿಯಾದ ಮರಕ್ಕೆ
ನಿಶಬ್ಧದೊಂದಿಗೆ ಏಕಾಂತ
ಮಾತ್ರ ಜೊತೆಯಾಗಿದೆ....
Monday, 2 July 2012
Subscribe to:
Posts (Atom)
ಅವಳ್ಯಾರು?
ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...

-
ಖಾಲಿ ಹಾಳೆಯ ಕೇಳಲು ಮುನಿಸೇಕೆಂದು , ಕಣ್ಸನ್ನೆ ಮಾಡಿತು ಲೇಖನಿಯ ಕಡೆಗೆ .. ಲೇಖನಿಗೆ ಕೇಳಿದಾಗ ಬೆಟ್ಟು ಮಾಡಿತದು , ಶಾಯಿ ಮುಗಿದ ಬಾಟಲಿಯ ಎಡೆಗೆ.....
-
ಭಾವಗಳನ್ನು ಹಾಳೆಯಲಿ ಗೀಚಿ ನೆಮ್ಮದಿ ಕಾಣ ಹೊರಟೆ.. ಪದಗಳ ಕೊರತೆ ಕಾಡಿ ಅದೆಷ್ಟೋ ಹಾಳೆಗಳ ಸುರುಟಿ ಎಸೆದೆ ಕವಿಯಾಗುತ್ತೇನೆಂದು ಅಂದುಕೊಳ್ಳುವುದೇನೋ ಸುಲಭ ಬರೆದಿದ...
-
ಚಂದಿರ ನಿನ್ನ ಹೊಗಳಿದ್ದ ಕಾರಣ ಮುನಿಸು ಬೆಳದಿಂಗಳಿಗೆ.. ರವಿಯೂ ನೋಡಿದಕ್ಕೆ ನಿನ್ನ ಕೋಪ ಸೂರ್ಯಕಾಂತಿಗೆ ... ಕಾರ್ಮೋಡ ನಿನಗೆ ತಂಪು ತರಲು ಮಿಂಚ...