Tuesday 1 May 2012

.....ಬಾರದೆ ಹೋದರೆ ನೀ.....







ರವಿ ಮಲಗಿ ಚಂದಿರನೆದ್ದರೂ ನೀ
ಮಾತ್ರ ಬಾರದೆ ಎಲ್ಲಿರುವೆ ಅಡಗಿ???
ತಾರೆಯೊಂದಿಗೆ ಆಗಸದಲ್ಲಿ ಮೋಡದ 
ಹೊದಿಕೆ ಹೊದ್ದು ನೀನಿರುವೆಯಾ ಮಲಗಿ???
ತಂಗಾಳಿಗಾಗಿ ಕಾದಿರುವೆ ನಾ
ಪರದೆ ಸರಿದು ಮಿಂಚುವ ನಿನ್ನ ಕಾಣಲು...
ನಿದ್ರಾ ಸುಂದರಿಗೆ ಕೇಳಿ ಬಂದೆ
ನಾ ಕಾಲಾವಕಾಶ 
ಕನಸಿನರಮನೆಯ ಕದ ಮುಚ್ಚುವಳು ಅವಳು 
ಬಾರದೆ ಹೋದರೆ ನೀ.....

2 comments:

  1. ಕಾಯುವಿಕೆಯ ವಿರಹಕ್ಕೆ ಕರಗನೇ ಆ ನಕ್ಷತ್ರನೂ, ಇಣುಕನೇ ನಿಮ್ಮ ಮನಸೊಳಗೆ...

    ReplyDelete
  2. ಧನ್ಯವಾದಗಳು ಸರ್:)

    ReplyDelete

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...