Thursday 5 April 2012

..ಇಬ್ಬನಿ...





ಅಧರದ ಮಂದಹಾಸವೂ,
ಕುಡಿನೋಟದ ಚೆಲುವೂ ,
ನಂಬಿದೆ ನಾ ನನಗಾಗೆ
ಮೀಸಲೆಂದು.
ಇಬ್ಬನಿಯಾದ ಅವಳು ನನ್ನ
ಬೊಗಸೆಗೆ ಬರುವಳೆಂದು.....
 ನನ್ನ ಭರವಸೆಯ ಹಕ್ಕಿಗೆ 
ಹೇಗೋ ಗಾಯವಾಗಿ 
ಆಸೆ ಕನ್ನಡಿಗಳೆಲ್ಲ ಒಡೆದವು ಒಮ್ಮೆಲೇ,
ಅವಳ ಕನಸನ್ನಾಗಲೇ ಆವರಿಸಿದ್ದ ಅವನು,
ಬೊಗಸೆಗೆ ಬಂದು ಸೇರುವ
ಮುನ್ನವೇ ರವಿಯಾಗಿ
ತನ್ನೆಡೆಗೆ ಸೆಳೆದಿದ್ದ ಅವನು..... 

  

2 comments:

  1. ಇಲ್ಲಿ ನನ್ನನ್ನು ದೆಳೆದದ್ದು ನಿರರ್ಗಳತೆ ಮತ್ತು ಸರಳ ಒಪ್ಪುವ ಶೈಲಿ.

    ಭಾವನೆಗಳನ್ನು ಚೆನ್ನಾಗಿ ಹೆಣೆಯುವ ಕಲೆ ನಿಮಗೆ ಗೊತ್ತಿದೆ ಮೇಡಂ.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  2. ಧನ್ಯವಾದಗಳು ಸರ್:):)

    ReplyDelete

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...