ವ್ಯಾಕರಣದಂತೆ ಬದುಕು
ಪ್ರಶ್ನಾರ್ಥಕ(??) ಚಿಹ್ನೆಗಳೇ
ಪ್ರತೀ ಸಾಲಿಗೂ
ಉತ್ತರ ದೊರೆತರೆ
ಆಶ್ಚರ್ಯ ಸೂಚಕವೆ(!) ಹೊರತು
ಪೂರ್ಣವಿರಾಮವಲ್ಲ(.)
ಪಾಪ! ಅಲ್ಪವಿರಾಮವು(,)
ಅಲ್ಲಲ್ಲೇ ಗಿರಗಿಟ್ಟಲೆ ಹೊಡೆದು
ಮತ್ತದೇ ಪ್ರಶ್ನಾರ್ಥಕದ
ಬೆನ್ನೇರಿದೆ..
ಬಾಳಿನ ಅಲಂಕಾರವೂ
ಉಪಮೇಯವೇ ಸಿಗದೆ ಚಿಂತೆಯ ಮೊರೆಯಿಟ್ಟಿದೆ
ಛಂದಸ್ಸಿನ ಪದ್ಯದಂತೆ ಜೀವನ
ಲಘು( U), ಗುರುಗಳ(-) ಸರಿಹೊಂದಿಸುತ್ತಾ
ಒಂದರ್ಥ ಕೊಡಲು
ಒದ್ದಾಡುತ್ತಾ ನಾಲ್ಕು ಸಾಲಿನ
ಚುಟುಕೂ ಆಗದೆ
ಹಾಳೆಯಲ್ಲಿ ಬೇರೆ ಪದಗಳ
ನಡುವೆ ಜಾಗ ಹುಡುಕುತ್ತಾ
ಅಲ್ಲಲ್ಲಿ ಕಾಣುವ ಖಾಲಿ ಜಾಗವಾಗುವುದೇನೂ ಕೊನೆಗೆ...
ಕನ್ನಡಕ್ಕಾಗಿ ಒಂದಷ್ಟು ದಿನ ಚಿಂತಿಸಿದ ಆಳದ ಮಾತುಗಳು ಸಮರ್ಥ ಭಾವಗಳಲ್ಲಿ ಪಡಿ ಮೂಡಿದೆ.ಸಾಮಾನ್ಯವಾಗಿ ಎಲ್ಲರೂ ಪ್ರೀತಿ-ಪ್ರೇಮ ಇದಕ್ಕೆ ಹೊಂದಿಕೊಂಡ ಬದುಕು,ಅದರೊಳಗಿನ ಸಿಹಿ-ಕಹಿಗಳನ್ನೇ ಕವಿತೆ ಕಟ್ಟುತ್ತಾರೆ. ಆದರೆ ಇಲ್ಲಿಯ ವಿಶೇಷತೆ ವಿಶಿಷ್ಟವೆನಿಸಿತು. ಇದು ಅಭಿನಂದನೀಯ.
ReplyDeleteಭಾವದ ವಾಕ್ಯವೆಂಬ ಬದುಕಿನ ಸಮಾಸವಾಗಬಹುದು. ಚೆನ್ನಾಗಿದೆ ವಿಭಿನ್ನ ಪ್ರಯೋಗ.
ReplyDeleteಧನ್ಯವಾದಗಳು ಸರ್:):)ನಿಮ್ಮ ಪ್ರೋತ್ಸಾಹ ಹೀಗೆ ಸಿಗುತ್ತಿದ್ದರೆ ಇನ್ನಷ್ಟು ಬರೆಯಲು ಪ್ರೇರಣೆ ಸಿಗುತ್ತದೆ:)
ReplyDeleteಕವಿತೆಯಲ್ಲಿಯೇ ಕನ್ನಡ ಪಾಠ .. :)
ReplyDeleteಇದು ನಮ್ಮ ಮೊದಲ ಪ್ರತಿಕ್ರಿಯೆ ಅನ್ನಿಸುತ್ತೆ ನಿಮ್ಮ ಕವಿತೆಗಳಿಗೆ .. ಆದರೆ ನಿಮ್ಮ ಬ್ಲಾಗ್ ಅಲ್ಲಿ ತುಂಬಾ ದಿನಗಳ ಹಿಂದೆಯೇ ಸೇರಿದ್ದರೂ ಅದರ ಲಿಂಕ್ ತಪ್ಪಿ ಹೋಗಿತ್ತು.. ಈ ದಿನ ನೋಡಿದಾಗಲೇ ತಿಳಿದದ್ದು .. ಮೊದಲೇ ಬ್ಲಾಗ್ ಅಲ್ಲಿ ನಾವಿದ್ದೇವೆ ಎಂದು.. ಇನ್ನು ಮುಂದೆ ಸಮಯ ಸಿಕ್ಕಾಗೆಲ್ಲಾ ನಿಮ್ಮ ಬ್ಲಾಗ್ ಅಲ್ಲಿ ಭೇಟಿ ಕೊಡುತ್ತೇವೆ.. ಈ ರೀತಿಯ ಮತ್ತಷ್ಟು ಪಾಠಗಳನ್ನು ಓದಲು ಕೊಡಿ & ಶುಭದಿನ.. :)
ಧನ್ಯವಾದಗಳು ಸರ್:):)ನಿಮ್ಮ ಪ್ರೋತ್ಸಾಹ ಹೀಗೆ ಸಿಗುತ್ತಿದ್ದರೆ ಇನ್ನಷ್ಟು ಬರೆಯಲು ಪ್ರೇರಣೆ ಸಿಗುತ್ತದೆ:)
Deleteಬದುಕನ್ನು ವ್ಯಾಕರಣಕ್ಕೆ ಅಮೋಘವಾಗಿ ಹೋಲಿಸಿದ್ದೀರ.
ReplyDeleteನಿಮ್ಮ ಪಾಲಿಗೆ (!)ಗಳು ಯಾವಾಗಲೂ ಸಂಭವಿಸಲಿ ಮತ್ತು ನನ್ನ ಬದುಕಲೂ (;) (,) ಮತ್ತು (.) ಬೇಗ ಮರೆಯಾಗಿ (....) ಮೂಡಲಿ.