ಇತಿಹಾಸವಾಗುವುದು ಏನನ್ನೋ ಅರಸುವ
ನಿನ್ನ ಕಣ್ಣಾಲಿಗಳು ನಿಂತ ತಾಣ,
ವ್ಯಥೆ ತೋಡುವುದು ನೆಲಕ್ಕುರುಳಿದ
ಮುದಿ ಎಲೆಯೂ ನೀ ನೋಡಿದಾಕ್ಷಣ,
ಅಸಂಖ್ಯಾತ ಚಹರೆಗಳು
ನಿನ್ನ ಕಣ್ಣ ಸೆರೆಯಲ್ಲಿ ,
ಪ್ರಕೃತಿಯೂ ಮಾತಾಡುವುದು
ಆ ಮಾಯಾನಗರಿಯಲ್ಲಿ,
ಚಂದ್ರ , ತಾರೆಯರೂ ಮಂದಹಾಸ
ಬೀರುವುವು ನೀ ಕಣ್ಣೆತ್ತಿ ನೋಡಲು,
ಪ್ರಪಂಚವೇ ನಲಿವುದು
ನಿನ್ನ ಕಣ್ಣ ರೆಪ್ಪೆಗಳು ಒಂದುಗೂಡಲು,
ಕನಸಿಗೂ ನಿನ್ನ ಸ್ವಾಗತಿಸಲು
ಅದೆಂಥಾ!! ತವಕ,
ಯಾವ ಸೊಗಸಾದ ಲೋಕ
ಕಟ್ಟಿರುವೆಯೂ ನೀನಲ್ಲಿ
ಎಂಬುವುದು ಪ್ರಶ್ನಾರ್ಥಕ??
ಒಂದು ಹನಿ ಇಬ್ಬನಿಯಲ್ಲಿ
ಇಡೀ ವಿಶ್ವವನ್ನೇ ಕಾಣುವೆ,
ಕಾರಣ ಹೇಳದೆ ಉರುಳುವ
ಕಂಬನಿಯನ್ನು ಕೆಲಗುರುಳದಂತೆ
ಸ್ಥಗಿತಗೊಳಿಸುವೆ,
ಮೂಕವಿಸ್ಮಯ ಜಗವ ನೋಡೋ
ಈ ನಿನ್ನ ಪರಿ,
ಕವಿ ಮನಸನ್ನೂ ಸೋಜಿಗಗೊಳಿಸಿದ
ನೀ ಜಾದುಗಾರನೇ ಸರಿ.......
(ಎಲ್ಲಾ ಛಾಯಾಗ್ರಾಹಕರಿಗೆ ಈ ಕವನ)
.....ಶೀತಲ್
ಟೀವಿ ಛಾಯಾಗ್ರಾಹಕನಾಗಿ, ನಮ್ಮ ಶ್ರಮವನ್ನು ಗುರ್ತಿಸಿ ಕವನವಾಗಿಸಿದ ನಿಮ್ಮ ಪ್ರೀತಿಗೆ ನನ್ನ ಅನಂತ ಪ್ರಣಾಮಗಳು.
ReplyDeleteನನ್ನ ಬ್ಲಾಗಿಗೂ ಸ್ವಾಗತ.
ಧನ್ಯವಾದಗಳನ್ನು ನಿಮಗೆ ಹೇಳಬೇಕು ಬದರಿ ಸರ್:)ಕವಿತೆಗೆ ಸ್ಫೂರ್ತಿ ನೀವೇ:)
ReplyDelete