ಚಂದಿರ ನಿನ್ನ ಹೊಗಳಿದ್ದ ಕಾರಣ
ಮುನಿಸು ಬೆಳದಿಂಗಳಿಗೆ..
ರವಿಯೂ ನೋಡಿದಕ್ಕೆ ನಿನ್ನ
ಕೋಪ ಸೂರ್ಯಕಾಂತಿಗೆ ...
ಕಾರ್ಮೋಡ ನಿನಗೆ ತಂಪು ತರಲು
ಮಿಂಚು ಗುಡುಗಿದ್ದಾಳೆ ತಾ ಬಾರದೆ..
ಸಾಗರವು ನಿನ್ನನ್ನಪ್ಪಲು ಅಲೆಯಾದಾಗ
ನದಿಗಳೆಲ್ಲಾ ಅತ್ತು ,
ಉಪ್ಪು ತುಂಬಿದರು ಅವನ ಎದೆಯೊಳಗೆ...
ವರ್ಣಿಸಲು ನಿನ್ನ ಸಾಧ್ಯವಾಗದೆ
ವ್ಯಾಕರಣವೂ ಪರದಾಡಿದೆ
ಉಪಮೇಯ ಸಿಗದೆ...
ನಿನ್ನ ನೆರಳು ಭುವಿಯ ಸೋಕುವಾಗ
ತಗುಲದಿರಲಿ ಕಲ್ಲೆಂದು
ಹುಲ್ಲುಗಾವಲೇ ನಿನ್ನ ಹಾದಿಯಾಗಿದೆ....
ಕಂಡ ಕ್ಷಣವೇ ನಿನ್ನ,
ನಾ ಕವಿಯಾಗಲು....
ಹೇಗೆ ತಾನೇ ಸಾಧ್ಯ???
ಹೇಳು ನಿನ್ನ ,
ನಾ ಪ್ರೀತಿಸದೇ ಇರಲು....
ಮೊದಲ ಪದ ಏನು?? ಚಂದ್ರನ್ನ ?? ಬಹಳ ಸುಂದರ ಉಪಮೆಗಳ ಹಾಸು ಕವನದ ತುಂಬಾ... ಚನ್ನಾಗಿದೆ...ಶೀತಲ್...
ReplyDeleteಇಲ್ಲಿ ಚಂದಿರ ಬೆಳದಿಂಗಳ ನಲ್ಲ ಅವನೂ ಸಹ ಬೆಳದಿಂಗಳ ಬಿಟ್ಟು ಇವಳನ್ನು ಹೊಗಳಿದಕ್ಕೆ ಬೆಳದಿಂಗಳಿಗೆ ಮುನಿಸು ಎಂದು .....ಚಂದಿರ ನಿನ್ನ (ಇವಳನ್ನ) ಎಂದು...ಧನ್ಯವಾದಗಳು:):)
Deleteಹೊಂಬಿಸಿಲಿನ ಮುತ್ತು ಇದು. ಭಾವ ಕಿರಣದ ರಂಗು. ಉಪಮೆ ಚೆನ್ನಾಗಿದೆ`ಶೀತಲ್.
ReplyDeleteಧನ್ಯವಾದಗಳು ಪುಷ್ಪರಾಜ್ ಸರ್:):)ಹೊಂಬಿಸಿಲಿನ ಮುತ್ತು....ಧನ್ಯವಾದ ಸರ್ ಮತ್ತೊಮ್ಮೆ:):)
Deleteಅಸಾಧ್ಯ ಬಿಡಿ, ಪ್ರೀತಿಸಲೇ ಬೇಕು....
ReplyDeleteಒಳ್ಳೆ ಶೈಲಿಯ ಸುಂದರ ಕವನ.
.ಧನ್ಯವಾದಗಳು ಬದರಿನಾಥ್ ಸರ್:):)
Deleteಧನ್ಯವಾದಗಳು:):)
ReplyDeletenice one yar
ReplyDeletethank u:)
Deleteಚಂದ ಇದೆ :-) ಇಲ್ಲಿ ಮತ್ತೊಮ್ಮೆ ಪ್ರತಿಕ್ರಿಯೆ :-)
ReplyDeleteಧನ್ಯವಾದ ಪ್ರಶಸ್ತಿ:):)
Deleteಚೆನ್ನಾಗಿದೆ ಶೀತಲ್........ ಸಾಮಾನ್ಯವಾಗಿ ಹುಡುಗಿ ಹುಡುಗಿಯನ್ನು ವರ್ಣಿಸಿ ಬರೆದಿದ್ದನ್ನು ನಾನು ನೋಡಿಲ್ಲ... ಕವನ ನೋಡಿ ಸಂತೋಷ ಹಾಗೂ ಆಶ್ಚರ್ಯ ಎರಡೂ ಒಟ್ಟಿಗೆ ಆಯಿತು :) ಚೆನ್ನಾಗಿದೆ ಸಾಲುಗಳು...... ಎಲ್ಲಕ್ಕಿಂತ ಮೇಲಾಗಿ "ನದಿಗಳೆಲ್ಲಾ ಅತ್ತು ,ಉಪ್ಪು ತುಂಬಿದರು ಅವನ ಎದೆಯೊಳಗೆ" ಅನ್ನೋ ಸಾಲು ತುಂಬಾನೇ ಖುಷಿ ಕೊಟ್ಟಿತು.... ಅಷ್ಟೊಂದು ಉಪ್ಪಿದ್ದರೂ ಇನ್ನು ಉಕ್ಕೇರಿ ಹರಿಯುತ್ತಿದೆಯಲ್ಲ ಆ ಕಡಲು ಅಂತ ಅನಿಸಿ ನಿಮ್ಮ ಸಾಲುಗಳು ಮತ್ತೆ ಮತ್ತೆ ಯೋಚನೆಯ ಲಹರಿಗೆ ಕರೆದೊಇದಿತು.......
ReplyDeleteಧನ್ಯವಾದಗಳು ನಿಮ್ಮ ಮೆಚ್ಚುಗೆಯ ನುಡಿಗಳಿಗೆ :)
Delete