ಓ ಬೆಳದಿಂಗಳೇ
ನೀ ಬರದೆ ಅಮಾವಾಸ್ಯೆಯ
ನೆರಳು ಇರುಳನ್ನೂ ಹೆದರಿಸಿದೆ
ತಾರೆಯರೆಲ್ಲರೂ ಮಿಂಚದೆ
ಮೋಡದ ಮರೆ ಸೇರಿ
ನಿನ್ನ ನೆನಪಲ್ಲೇ ಮಿಂದಿವೆ
ಬೀಸುವ ತಂಗಾಳಿಯೂ
ಮೌನ ತಾಳಿ ನಿಶಬ್ಧವ
ಎಲೆಲ್ಲೂ ಹರಡಿದೆ
ನಾ ನೋಡಲು
ನೀಲಿ ಆಕಾಶವೂ
ಕಪ್ಪು ವರ್ಣದ ಖೈದಿಯಾಗಿ
ನೀ ಬಂದು ಬಿಡಿಸಲು ಕಾತುರತೆಯಿಂದ
ಕಾಯುತ್ತಿದೆ
ಇಷ್ಟೆಲ್ಲಾ ಆದರೂ ನೀನೆಲ್ಲಿ
ಮರೆಯಾಗಿ ನಿಂತಿರುವೆ?
ನೀನೂ ಬಾರದಂತೆ
ಆಜ್ಞೆ ಮಾಡಿತೇ ಆ ಅಮಾವಾಸ್ಯೆ?
ಅಥವಾ
ನಿನಗೂ ನಾ ಬದುಕುತ್ತಿರುವ
ಕಗ್ಗತ್ತಲ ಭಯವೇ???
ಉತ್ತಮ ಕಲ್ಪನೆಯ ಸು೦ದರ ಕವನ ಶೀತಲ್, ಅಭಿನ೦ದನೆಗಳು. ನನ್ನ ಬ್ಲಾಗ್ ಗೂ ಬನ್ನಿ.
ReplyDeleteಧನ್ಯವಾದ ಮೇಡಂ:):)ನಿಮ್ಮ ಆಮಂತ್ರಣಕ್ಕೆ ಧನ್ಯವಾದಗಳು:):)
Delete