Thursday, 9 February 2012

..ಜೊತೆ...





ನಿನಗಾಗಿ ಗೀಚಿದ ಕವನಗಳಿಗೆ ಲೆಕ್ಕವಿಲ್ಲ
ನಾ ಬರೆಯುತ್ತಲೇ ಹೋದೆ
ನೀನಿದ್ದೆ ನಿನ್ನ ಪಾಡಿಗೆ ಲೆಕ್ಕಿಸದೆ
ನಿನಗೆಂದೇ ನಾನಾದೆ
ಕೊನೆಗೂ ಕವಿ
ಮೂಕ ಭಾವನೆಗಳು,ಮೌನ ಸಂಭಾಷಣೆಗಳು
ಅರ್ಥವಾಗದಾಗ ನಾ ಹಿಡಿದ
ದಾರಿ ಇದು
ಒಬ್ಬಂಟಿಗ ನಾನು 
ಪ್ರೀತಿ ಕವನಕ್ಕೆ ಮಾತ್ರ ಮೀಸಲಾಯಿತು
ಲೇಖನಿ,ಹಾಳೆಗಳೇ ನೀನಿರದ
ದಾರಿಯಲ್ಲಿ ಜೊತೆಯಾಯಿತು....

2 comments:

  1. ಬಹುಶಃ ಕೆ.ಎಸ್. ನರಸಿಂಹಸ್ವಾಮಿಗಳೂ ಹೀಗೆ ಕವಿಯಾದರೂ ಅನಿಸುತ್ತೆ.

    ReplyDelete
  2. ತುಂಬಾ ಧನ್ಯವಾದಗಳು ಸರ್:):) ನಿಮ್ಮ ಪ್ರತಿಕ್ರಿಯೆಗಳೇ ಸ್ಫೂರ್ತಿ ಕವನ ಬರಿಯಲಿಕ್ಕೆ:)ಕೆಲವೊಮ್ಮೆ ನಿಮ್ಮ ಪ್ರತಿಕ್ರಿಯೆಗಳಿಗೋಸ್ಕರ ಕವನ ಬರೆಯೋಣ ಅಂತನಿಸುತ್ತೆ:):):)

    ReplyDelete

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...