Wednesday, 25 January 2012

ನೀನಿಲ್ಲದೆ ನಾ,

ನೀನಿಲ್ಲದೆ ನಾ,
 ಜೀವವಿರದ ದೇಹ
ಶ್ರುತಿ ಇರದ ಹಾಡು
ಅರ್ಥವಿರದ ಕವನ
ತಂತಿ ಇರದ ವೀಣೆ 
ಪರಿಮಳವಿರದ  ಗುಲಾಬಿ
ಮಿನುಗದ ತಾರೆ
ಉಪ್ಪಿರದ ಅಡುಗೆ 
ಇಬ್ಬನಿ ಇರದ ಮುಂಜಾವು
ಬಣ್ಣಗಳಿರದ ಕಾಮನಬಿಲ್ಲು
ಶಬ್ದವಿಲ್ಲದ ಮಾತು
ಹೊಳಪು ಕಳೆದುಕೊಂಡ ವಜ್ರ
ನೀರಿರದ ಜಲಪಾತ
ಅಲೆಗಳಿರದ ಸಾಗರ
ಬಣ್ಣಗಳಿರದ ಲೋಕ
ಅಂತ್ಯವಿಲ್ಲದ ದಾರಿ
ನಾವಿಕನಿಲ್ಲದ ದೋಣಿ
ಎಲೆಗಳಿರದ ಮರ
ಮಗುವಿಲ್ಲದ ತೊಟ್ಟಿಲು
ರುಚಿ ಇಲ್ಲದ ಹಣ್ಣು
ನಗುವಿಲ್ಲದ ತುಟಿ
ಪ್ರೀತಿ ,
ನೀನಿಲ್ಲದ ಬಾಳು 
ಬರಡು...
ಬರಡು..
ಪದಗಳಿರದ ಖಾಲಿ ಹಾಳೆ......

2 comments:

  1. ಪ್ರೀತಿಯಲ್ಲಿ ಕಾಡಬಹುದಾದ ಎಲ್ಲಾ ಉಪಮೆಗಳನು ಒಟ್ಟುಗೂಡಿಸಿದಂತಿದೆ ಕವಿತೆಯ ಭಾವ.. ಮನಸ್ಸಿನ ಮೇಲೆ ಒಮ್ಮೆಲೆ ಪ್ರೀತಿಯ ಭಾವಗಳು ದಾಳಿ ಇಟ್ಟಂತೆನಿಸುತ್ತದೆ.. ಚೆಂದದ ಕವಿತೆ..

    ReplyDelete

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...