Sunday, 25 December 2011

.....ಅಲ್ಲಿಯೇ ಬದುಕು.....


ಭಾವಗಳನ್ನು ಹಾಳೆಯಲಿ ಗೀಚಿ 
ನೆಮ್ಮದಿ ಕಾಣ ಹೊರಟೆ..
ಪದಗಳ ಕೊರತೆ ಕಾಡಿ 
ಅದೆಷ್ಟೋ ಹಾಳೆಗಳ ಸುರುಟಿ ಎಸೆದೆ
ಕವಿಯಾಗುತ್ತೇನೆಂದು ಅಂದುಕೊಳ್ಳುವುದೇನೋ ಸುಲಭ
ಬರೆದಿದ್ದೆಲ್ಲಾ ಕವನವಾಗಲು ಸಾಧ್ಯವೇ?
ಅಸ್ಪಷ್ಟ ಭಾವನೆಗಳಿರಲು ಮನದಲಿ
ಪದಗಳು ತಾನೇ ಏನು ಮಾಡಲು ಸಾಧ್ಯ?
ತುಮುಲ ತುಂಬಿದ ಹೃದಯಕ್ಕೆ
ಸಾಂತ್ವನ ಹೇಳಬಲ್ಲದೆ ಲೇಖನಿ ,ಕಾಗದ?
ಪ್ರತೀ ಪ್ರಶ್ನೆಗೂ ಉತ್ತರ
ಪ್ರತೀ ಕಂಬನಿಗೂ ಕಾರಣ
ಹುಡುಕಿದಷ್ಟೂ ಕಾಗದ ತುದಿ ತಲುಪುವೆವು ಹೊರತು
ಮತ್ತದೇ ಪ್ರಶ್ನೆಗಳಿಗೆ ಬಂದು ನಿಲ್ಲುವುದು ಬದುಕು....

7 comments:

  1. ಶೀತಲ್,
    ಬ್ಲಾಗ್ ಲೋಕಕ್ಕೆ ಸ್ವಾಗತ.ನಿಮ್ಮ ಕವಿತೆಗಳಲ್ಲಿ ಹೊಸತನವಿದೆ.ಮುಂದುವರಿಸಿ.
    ಅಭಿನಂದನೆಗಳು.

    ReplyDelete
  2. ಶೀತಲ್ .......ನಿಮ್ಮ ಕವಿತೆ ಚೆನ್ನಾಗಿದೆ ....ಪ್ರಯತ್ನ ಮುಂದುವರೆಸಿ ಶುಭವಾಗಲಿ.........

    ReplyDelete
  3. ಇದನ್ನು ಈ ಮೊದಲೇ ಎಲ್ಲೋ ಓದಿದ ನೆನಪು..
    ಕವನದ ಪದಗಳ ಜೋಡಣೆ ಮನಸೆಳೆಯುವಂತಿದೆ..
    ಫೆಸ್`ಬುಕ್ ಅಲ್ಲಿ ಓದಿರಬಹುದೇನೋ .. ತುಂಬಾ ದಿನಗಳು ಆಗಿವೆ.. ಮತ್ತೆ ಓದಿ ಖುಷಿ ಆಯಿತು.. ಭಾವನೆಗಳ ಅತೀ ಸೊಗಸಾಗಿ ಬರೆದಿದ್ದೀರಾ .. ಅಷ್ಟೇ ಅಲ್ಲದೆ.. ನೀಲಿ ಬಣ್ಣ , ಕೆಂಪು , ಹಸಿರು ಮತ್ತು ಬಿಳಿ ಬಣ್ಣ .. ತುಂಬಾ ಇಷ್ಟ.. ಇಲ್ಲಿ ಹಾಕಿರುವ ಅನೇಕ ಚಿತ್ರಗಳಲ್ಲಿ ನೀಲಿ ಬಣ್ಣ ಇದೆ.. ಅದು ಬಹಳಾ ಖುಷಿ ಕೊಟ್ಟಿದೆ.. ಕವನಗಳ ಓದುವ ಮೊದಲೇ ನೀಲಿ ಬಣ್ಣ ನೋಡಿ ಬ್ಲಾಗ್ ಸೇರಿಕೊಂಡೆವು.. ಆಮೇಲೆ ಕವನಗಳ ಓದಿದ ಮೇಲೆ ತುಂಬಾ ಖುಷಿ ಆಯಿತು.. ನಿಮಗೆ ಶುಭವಾಗಲಿ.. :)

    ReplyDelete
    Replies
    1. ಧನ್ಯವಾದಗಳು ಸರ್...:)ಕವಿತೆಯನ್ನು ಕನ್ನಡ ಬ್ಲಾಗ್ನಲ್ಲಿ ಹಾಕಿದ್ದೆ ಅಲ್ಲಿ ಓದಿರಬಹುದು ನೀವು...:)ನಿಮ್ಮೆಲ್ಲರ ಪ್ರೋತ್ಸಾಹದಿಂದಲೇ ಇಷ್ಟೆಲ್ಲಾ ಬರೆಯಲು ಆಗಿದ್ದು...:):)ಮತ್ತೊಮ್ಮೆ ಧನ್ಯವಾದಗಳು ಸರ್:):)

      Delete
  4. ಈ ಹುಡುಕಾಟದ ತಪನೆಯಲ್ಲೇ ಒಲುಮೆಯ ಸಾಕ್ಷಾತ್ಕಾರವೂ ಇದೆ ಗೆಳತಿ. ಇಲ್ಲಿನ ಪದಗಳ ಲಾಲಿತ್ಯವೂ ನೆಚ್ಚಿಗೆಯಾಯಿತು.

    ReplyDelete

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...