ಖಾಲಿ ಹಾಳೆಯ ಕೇಳಲು ಮುನಿಸೇಕೆಂದು ,
ಕಣ್ಸನ್ನೆ ಮಾಡಿತು ಲೇಖನಿಯ ಕಡೆಗೆ ..
ಲೇಖನಿಗೆ ಕೇಳಿದಾಗ ಬೆಟ್ಟು ಮಾಡಿತದು ,
ಶಾಯಿ ಮುಗಿದ ಬಾಟಲಿಯ ಎಡೆಗೆ..
ಒಣಗಿದ ಶಾಯಿಯ ಬಾಟಲಿಯಡೆ,
ನಾ ತಿರುಗಲು
ತೋರಿಸಿತದು ಹತ್ತಿರವಿದ್ದ ಕನ್ನಡಿಯ....
ಪದಗಳ ಬರ ಬರೆಯದಿರಲು ಕಾರಣ ವೆನಲು
ನಾ ಕನ್ನಡಿಗೆ,
ದೂರದಲಿದ್ದ ನಿಘಂಟನೊಮ್ಮೆ ನೋಡಿ
ನಸುನಕ್ಕಿತು ಪ್ರತಿಬಿಂಬ....
ಕವಿಯ ಅನಿವಾರ್ಯತೆ ಮತ್ತು ಅಕ್ಷರ ಪ್ರೀತಿ ಇಲ್ಲಿ ಒಡ ಮೂಡಿದೆ.
ReplyDeleteಚೆನಾಗಿದೆ..ಬರೆಯುತ್ತಿರಿ...ಚಿತ್ರವೂ ಇಷ್ಟವಾಯ್ತು...
ReplyDeletethank you so much :)
DeleteSheethal.. what a writting.. u deserve to become great writer in coming days
ReplyDeletethank you means a lot :)
Deletenice one...
ReplyDelete